International Journal For Multidisciplinary Research

E-ISSN: 2582-2160   •   Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 5 (September-October 2026) Submit your research before last 3 days of October to publish your research paper in the issue of September-October.

Allamaprabhudevaru mattu Vichara Kranti

Author(s) Dr. Shubha Maravanthe
Country India
Abstract ಸಾಹಿತ್ಯ ಮಾಧ್ಯಮದಲ್ಲಿ ಅಲ್ಲಮ ಹೇಳುವ ಪ್ರತಿ ಶಬ್ದ ಪರಿಕಲ್ಪನೆಯು ಹೊಳೆಯಿಸುವ ಅರ್ಥ ರೂಪಕಗಳು ನಿಜಕ್ಕೂ ‘ಶಬ್ದಸಂಭ್ರಮ’ವೇ ಸರಿ. ಈ ಶಬ್ದ ಸಂಭ್ರಮ ಅಲ್ಲಮನ ವಚನಗಳ ನಿಜವಾದ ಶಕ್ತಿ. ವಚನಗಳ ಒಳಗೆ ಎಂಥ ನಿಗೂಢವಾದ ಒಂದು ಅರ್ಥವನ್ನು ಇಟ್ಟು ಪ್ರಭುದೇವರು ವಚನಗಳನ್ನು ಬರೆಯುತ್ತಾರೆಂದರೆ ಶಬ್ದದಾಚೆಗೆ ಅರ್ಥವು ವಿಜೃಂಭಿಸುತ್ತದೆ. ‘ಎರಡೆಂಬತ್ತು ಕೋಟಿ ವಚನಗಳ ಹಾಡಿ ಹಾಡಿ ಹಲವ ಹಂಬಲಿಸಿತ್ತೆನ್ನ ಮನ’ ಇದು ಆತ್ಮ ಶೋಧದ ಒಂದು ನೆಲೆ. ವಚನಕಾರರಲ್ಲಿ ಮೊದಲು ಕಾಣುವುದು ಆತ್ಮ ಸ್ವಪರೀಕ್ಷೆ. ಸ್ವನಿರೀಕ್ಷಣ. ನಿಜವಾದ ಅರ್ಥದಲ್ಲಿ ವಚನಕಾರರು ಬೋಧಕರಲ್ಲ. ನೀನು ಮಾಡು ನೀನು ಮಾಡು ಎನ್ನುವುದಕ್ಕಿಂತ ನಾನೇನು ಮಾಡಬೇಕಾಗಿದೆ ಅನ್ನುವುದನ್ನು ಚಿಂತಿಸಿದವರು. ಸೂಕ್ಷ್ಮವಾಗಿ ತನ್ನನ್ನು ತಾನು ವಿಡಂಬಿಸಿಕೊಳ್ಳುವುದು, ತನ್ನನ್ನು ತಾನು ಶೋಧಿಸಿಕೊಳ್ಳುವುದು ವಚನಗಳ ಮುಖ್ಯ ಗುರಿ. ಈ ವಿಡಂಬನೆಯಿಂದ ಇನ್ನೊಬ್ಬರಿಗೆ ನೋವಿಲ್ಲ; ಈ ವಿಡಂಬನೆಗಳಿಂದ ಇನ್ನೊಬ್ಬರಿಗೆ ಯಾವುದೇ ಅಪಮಾನವಿಲ್ಲ. ಈ ವಿಡಂಬನೆ ತನ್ನನ್ನ ತಾನು ಅರ್ಥೈಸಿಕೊಳ್ಳುವ ತನ್ನ ತಪ್ಪುಗಳನ್ನ ತಾನೇ ತಿದ್ದಿಕೊಳ್ಳುವ ಒಂದು ವಿವೇಕ.
Keywords ಶಬ್ದಸಂಭ್ರಮ, ವಚನ ಸ್ವಪರೀಕ್ಷೆ, ಸ್ವನಿರೀಕ್ಷಣ, ವಿವೇಕ, ಬಯಲು, ವಿಚಾರ ಕ್ರಾಂತಿ, ವಿಡಂಬನೆ, ಸಂಸ್ಕøತಿ ಮೀಮಾಂಸೆ, ರೂಪಕ, ಅನುಭಾವ
Published In Volume 5, Issue 1, January-February 2023
Published On 2023-01-07

Share this