International Journal For Multidisciplinary Research

E-ISSN: 2582-2160   •   Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 5 (September-October 2026) Submit your research before last 3 days of October to publish your research paper in the issue of September-October.

Shri Nirupadeeshara Arivina Andolanada 'Anubhavadaralu'

Author(s) Dr. Shubha Maravanthe
Country India
Abstract ‘ಅನುಭಾವದರಳು’ ಹಲವು ಕಾರಣಗಳಿಗಾಗಿ ಮಹತ್ವದ ಕೃತಿ ಎನಿಸಿದೆ. ಅವರ ವಚನಗಳ ಭಾವ, ಭಾಷೆ, ತತ್ವ, ದರ್ಶನ, ಧರ್ಮ, ಕರ್ಮ ಸಂಸ್ಕøತಿ ಚಿಂತನೆ, ಕಾವ್ಯ ಸಿದ್ಧಾಂತ, ಅನುಭಾವ, ಲೋಕಾನುಭವ, ಆಚಾರ-ವಿಚಾರಗಳ ಪರಾಮರ್ಶೆ ಮೊದಲಾದ ಹಲವು ವೈಚಾರಿಕತೆಗಳು ಒಟ್ಟಂದದಲ್ಲಿ ಎರಕ ಹೊಯ್ದಂತೆ ಪ್ರಸ್ತುತ ಸಂಕಲನ ಮೂಡಿಬಂದಿದೆ. ವಚನ, ತ್ರಿಪದಿ ಮತ್ತು ಚೌಪದಿ ಈ ಮೂರು ಪ್ರಕಾರಗಳನ್ನು ಬಳಸಿಕೊಂಡು ‘ಅನುಭಾವದರಳು’ ಕೃತಿ ರಚಿತವಾಗಿದೆ. ಸಂಪಾದಕರು ಈ ಕೃತಿಯ ಆರಂಭದಲ್ಲಿಯೇ ಗುರುತಿಸಿರುವಂತೆ ಸರ್ವಜ್ಞನ ವಚನಗಳನ್ನು ಕಗ್ಗದ ಭಾವ ಭಾಷೆಗಳನ್ನು ವಚನ ರಚನೆಯ ಸೊಗಡನ್ನು ಸಂಸ್ಕøತಿಯ ವಿವೇಕವನ್ನು ಒಟ್ಟಾಗಿ ಬೆರೆತುಕೊಂಡಿದೆ. ಸಾಮಾನ್ಯ ಜೀವನದ ಹಲವು ಅನುಭವಗಳಿಗೆ ಕಾವ್ಯದ ಭಾಷೆ ಕೊಟ್ಟು ನಿರೂಪಿಸುವ ಕೌಶಲ ಇಲ್ಲಿ ವಿಶೇಷವೆನಿಸಿದೆ. ಸರ್ವಜ್ಞನ ವಚನಗಳಿಂದ ಪ್ರಭಾವಿತರಾದ ಪೂಜ್ಯರು ಅದೇ ಪ್ರಕಾರವನ್ನು ತಮ್ಮ ಕಾವ್ಯ ನಿರ್ಮಿತಿಗೆ ಬಳಸಿಕೊಂಡಿದ್ದಾರೆ. ತ್ರಿಪದಿ ತೋರಣ, ಚೌಪದಿ ಚಂಪಕ ಎರಡು ವಿಭಾಗಗಳಲ್ಲಿ ಹರಡಿಕೊಂಡ ಈ ಉದ್ಗ್ರಂಥದಲ್ಲಿ 1129 ತ್ರಿಪದಿಗಳೂ, 1520 ಚೌಪದಿಗಳಿವೆ. ತ್ರಿಪದಿ ತೋರಣದಲ್ಲಿ ಶುೃತಿಶ್ರೀ, ಶಬ್ದಶ್ರೀ, ಸುಜ್ಞಾನಶ್ರೀ, ಸ್ವರಶ್ರೀ, ಸಂಕೇತಶ್ರೀ ಎಂಬ ಒಟ್ಟು 5 ವಿಭಾಗಗಳಿವೆ. ಚೌಪದಿ ಚಂಪಕದಲ್ಲಿ ಸ್ತುತಿಶ್ರೀ, ಚಿಂತನಶ್ರೀ, ವಿಚಾರಶ್ರೀ, ಧರ್ಮಶ್ರೀ, ಸಂಕೀರ್ಣಶ್ರೀ, ಸಂಸ್ಕøತಿಶ್ರೀ, ಶಿಕ್ಷಣಶ್ರೀ, ಸಾಹಿತ್ಯಶ್ರೀ, ಆರೋಗ್ಯಶ್ರೀ, ಸಮಯಶ್ರೀ ಎಂಬ ಹತ್ತು ವಿಭಾಗಗಳಿವೆ.
Keywords ಸ್ವತಂತ್ರಗತಿ, ಸ್ವತಂತ್ರಮತಿ ತತ್ವ, ದರ್ಶನ, ಧರ್ಮ, ಕರ್ಮ ಸಂಸ್ಕøತಿ ಚಿಂತನೆ, ಕಾವ್ಯ ಸಿದ್ಧಾಂತ, ಅನುಭಾವ, ಲೋಕಾನುಭವ, ಆಚಾರ-ವಿಚಾರ, ದೂರದೃಷ್ಟಿ, ಅನುಭವದ ವಿಸ್ತಾರ, ಪದಜಾಣ್ಮೆ, ಕ್ರಿಯಾಶೀಲತೆ, ನುಡಿ ಸ್ಪಷ್ಟತೆ
Published In Volume 6, Issue 5, September-October 2024
Published On 2024-09-13

Share this