International Journal For Multidisciplinary Research

E-ISSN: 2582-2160   •   Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 5 (September-October 2026) Submit your research before last 3 days of October to publish your research paper in the issue of September-October.

ವಚನ ಸಂಕ್ರಾಂತಿ : ಬದಲಾವಣೆಯ ಆಶಯಗಳು

Author(s) Dr. Shubha Maravanthe
Country India
Abstract ಸಂಕ್ರಾಂತಿಗೆ ನಮ್ಮ ಸನಾತನ ಧಾರ್ಮಿಕ ಪರಂಪರೆಯಲ್ಲಿ ಹೆಚ್ಚಿನ ಮಹತ್ವವಿದೆ. ಪ್ರಕೃತಿಯಲ್ಲಾಗುವ ಬದಲಾವಣೆಗೆ ಮನುಷ್ಯ ತೋರುವ ಸ್ಪಂದನೆಯ ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿಯೂ ಒಂದು. ಭೂಮಿ ಸಕಲ ಜೀವ ಜಾಲಗಳಿಗೆ ಮಾತೃ ಸ್ವರೂಪಿ. ಭೂಮಿಯ ನಿರಂತರ ಚಲನೆಯೇ ಕಾಲ ಮಾಪಕ. ಇದರ ಹುಟ್ಟು ಹಿಡಿದು ನಡೆಸುವವರೆ ಸೂರ್ಯ ಚಂದ್ರರು. ಮನುಷ್ಯರು ರೂಢಿಸಿಕೊಂಡ ಈ ಎಲ್ಲಾ ಸಂಪ್ರದಾಯಗಳಿಗೂ ಭೂಮಿಯೇ ಆಧಾರ. ಭೂಮಿ ಕೇಂದ್ರಿತ ಆಚರಣೆಯ ಭಾಗವಾಗಿ ಸೂರ್ಯ-ಚಂದ್ರ, ಗ್ರಹ, ನಕ್ಷತ್ರ, ರಾಶಿ, ಋತು ಇತ್ಯಾದಿಗಳನ್ನು ಅನುಸರಿಸಿಯೇ ನಮ್ಮ ತಿಥಿ, ಪಂಚಾಂಗಗಳು ರಚನೆಯಾದವು. ಹೊಲ, ಗದ್ದೆ ಪೈರು, ಎತ್ತು-ದನ ಕರುಗಳು, ಎಳ್ಳು-ಬೆಲ್ಲ ಹೀಗೆ ಪ್ರಕೃತಿ ಪರಿಕರಗಳು ಪ್ರಕೃತಿ ಆರಾಧನೆಯ ಸಂಕೇತಗಳಾದವು. ಹಗಲು-ರಾತ್ರಿ- ಹುಟ್ಟು-ಸಾವಿನ ಪ್ರಶ್ನೆಗಳೆ ನಮ್ಮ ಶಾಸ್ತ್ರ ಆಚರಣೆ, ಸಂಪ್ರದಾಯಗಳಾಗಿ ರೂಪುಗೊಂಡವು. ಮನುಷ್ಯನಲ್ಲಿ ಭಯ, ಕಂದಾಚಾರ, ಮೌಢ್ಯತೆಗಳು ಬೆಳೆಯಲು ಕಾರಣವಾದವು. ಮುಗ್ಧ ಜನ ಸಮುದಾಯ ಈ ಭೀತ ಸ್ಥಿತಿಯಲ್ಲಿಯೇ ದೇವರನ್ನು ಸೃಷ್ಟಿಕೊಂಡರು. ಪಾಪ ಪುಣ್ಯ, ಧರ್ಮ ಅಧರ್ಮದ ಕಾರ್ಯ ಕಾರಣವನ್ನು ಮುಂದಿಡುವ ತರ್ಕ, ನೀತಿಗಳನ್ನು ರೂಪಿಸಲಾಯಿತು. ಮನುಷ್ಯ ಮನುಷ್ಯನ ನಡುವೆ ವಿಧಿ ನಿಷೇಧಗಳನ್ನು ತಂದಿಡುವ ವಿಧಿವಾದವನ್ನು ಹುಟ್ಟುಹಾಕಲಾಯಿತು. ಮನುಷ್ಯನನ್ನು ವಿಭಜಿಸುವ ವರ್ಣಸೃಷ್ಟಿಯೇ ನಮ್ಮ ಸಂಸ್ಕøತಿಯ ದೊಡ್ಡ ದುರಂತವಾಯಿತು. ಇದಕ್ಕೆ ಪ್ರತಿಯಾಗಿ ಬುದ್ಧನಾದಿಯಾಗಿ ಬಸವ, ಗಾಂಧಿ ಅಂಬೇಡ್ಕರ್ ಹುಟ್ಟು ಹಾಕಿದ ಮೌಢ್ಯ ವಿರೋಧಿ ನಡೆಯೇ ನಿಜವಾದ ಕ್ರಾಂತಿ, ಹೊಸ ಅರ್ಥದ ಸಂಕ್ರಾಂತಿಯಾಯಿತು.
Keywords ಸೂರ್ಯ-ಚಂದ್ರ, ಗ್ರಹ, ನಕ್ಷತ್ರ, ರಾಶಿ, ಋತು, ಜನಜೀವನ, ಸುಖ, ಶಾಂತಿ, ಸಮೃದ್ಧಿ, ತಿಥಿ, ಪಂಚಾಂಗ, ಸಂಕ್ರಾಂತಿ, ಸ್ವರ್ಗ-ನರಕ
Field Arts
Published In Volume 4, Issue 6, November-December 2022
Published On 2022-12-08

Share this