International Journal For Multidisciplinary Research

E-ISSN: 2582-2160   •   Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 5 (September-October 2026) Submit your research before last 3 days of October to publish your research paper in the issue of September-October.

Kuvempu Avara Shudratapasvi Mattu Jalagara Naatakagalalli Varnashrama Hagu Purohitashaahi Virodhi Chintane

Author(s) Dr. KRISHNAPPA K N
Country India
Abstract ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರು ಕೇವಲ ಸೃಜನಶೀಲ ಸಾಹಿತಿಯಾಗಿ ಮಾತ್ರವಲ್ಲದೆ, ಸಾಮಾಜಿಕ ಪರಿವರ್ತನೆಯ ಆಶಯವನ್ನು ಹೊಂದಿದ ವೈಚಾರಿಕ ಲೇಖಕರಾಗಿಯೂ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಅವರ ಸಾಹಿತ್ಯದಲ್ಲಿ ಜಾತಿ, ವರ್ಣ, ವರ್ಗ, ಧರ್ಮ, ಪುರೋಹಿತಶಾಹಿ, ಕಂದಾಚಾರ, ಮೂಢನಂಬಿಕೆ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧದ ಪ್ರತಿರೋಧ ನಿರಂತರವಾಗಿ ವ್ಯಕ್ತವಾಗುತ್ತದೆ. ಮನುಷ್ಯನ ಘನತೆ, ಸಮಾನತೆ, ವೈಚಾರಿಕತೆ ಮತ್ತು ವಿಶ್ವಮಾನವತೆಯೇ ಅವರ ಚಿಂತನೆಯ ಪ್ರಮುಖ ನೆಲೆಗಳಾಗಿವೆ.
ಈ ಸಂಶೋಧನಾ ಲೇಖನವು ಮುಖ್ಯವಾಗಿ ಕುವೆಂಪು ಅವರ ʻಶೂದ್ರತಪಸ್ವಿʼ ಮತ್ತು ʻಜಲಗಾರʼ ನಾಟಕಗಳನ್ನು ಕೇಂದ್ರವಾಗಿಸಿಕೊಂಡು ಅವರ ಪುರೋಹಿತಶಾಹಿ ಮತ್ತು ಜಾತಿ ವಿರೋಧಿ ಚಿಂತನೆಗಳನ್ನು ವಿಶ್ಲೇಷಿಸುತ್ತದೆ. ಶೂದ್ರತಪಸ್ವಿಯಲ್ಲಿ ಜ್ಞಾನ ಮತ್ತು ತಪಸ್ಸಿನ ಮೇಲೆ ಜಾತಿಯ ಆಧಾರದ ನಿಯಂತ್ರಣವನ್ನು ಪ್ರಶ್ನಿಸುವ ಮೂಲಕ ಸಮಾನತೆಯ ತತ್ತ್ವವನ್ನು ಪ್ರತಿಪಾದಿಸಲಾಗಿದೆ. ಜಲಗಾರದಲ್ಲಿ ಧರ್ಮ, ದೇವರು, ದೇವಾಲಯ ಮತ್ತು ಪುರೋಹಿತಶಾಹಿಯ ನಡುವೆ ನಿರ್ಮಾಣವಾಗಿರುವ ಅಧಿಕಾರ ಸಂಬಂಧಗಳನ್ನು ವಿಡಂಬನಾತ್ಮಕವಾಗಿ ಅನಾವರಣಗೊಳಿಸಲಾಗಿದೆ. ಈ ಎರಡೂ ನಾಟಕಗಳ ಮೂಲಕ ಕುವೆಂಪು ಅವರು ಜ್ಞಾನ, ಧರ್ಮ ಮತ್ತು ದೇವರನ್ನು ಯಾವುದೇ ನಿರ್ದಿಷ್ಟ ಜಾತಿ ಅಥವಾ ವರ್ಗದ ಸ್ವತ್ತಾಗಿಸುವ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ.
ಈ ಅಧ್ಯಯನವು ಕುವೆಂಪು ಅವರ ಸಾಹಿತ್ಯವು ಕೇವಲ ಸಾಹಿತ್ಯಕ ಅಭಿವ್ಯಕ್ತಿಯಲ್ಲದೆ, ಸಾಮಾಜಿಕ ವಿಮರ್ಶೆ ಮತ್ತು ಮಾನವಮುಕ್ತಿಯ ಚಿಂತನೆಯ ಪ್ರಬಲ ಮಾಧ್ಯಮವಾಗಿದೆ ಎಂಬುದನ್ನು ಪ್ರತಿಪಾದಿಸುತ್ತದೆ. ಇಂದಿನ ಸಾಮಾಜಿಕ ಸಂದರ್ಭದಲ್ಲಿ ಜಾತೀಯತೆ, ಕೋಮುವಾದ, ಮೂಲಭೂತವಾದ ಮತ್ತು ಧಾರ್ಮಿಕ ಅಸಹಿಷ್ಣುತೆಗಳು ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕುವೆಂಪು ಅವರ ವೈಚಾರಿಕ ಚಿಂತನೆಗಳು ಇನ್ನಷ್ಟು ಪ್ರಸ್ತುತವಾಗಿವೆ.
Keywords ಕುವೆಂಪು, ಜಾತಿವ್ಯವಸ್ಥೆ, ವರ್ಣವ್ಯವಸ್ಥೆ, ಪುರೋಹಿತಶಾಹಿ, ಶೂದ್ರತಪಸ್ವಿ, ಜಲಗಾರ, ಮಾನವತಾವಾದ, ಸಮಾನತೆ, ಕೋಮುವಾದ, ವೈಚಾರಿಕತೆ.
Field Arts
Published In Volume 8, Issue 4, July-August 2026
Published On 2026-08-17
DOI https://doi.org/10.36948/ijfmr.2026.v08i04.85960

Share this