International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 4 (July-August 2026) Submit your research before last 3 days of August to publish your research paper in the issue of July-August.

ಮಕಾಲೀನ ಸಮಾಜಕ್ಕೆ ಫಕೀರನ ಪ್ರಸ್ತುತತೆ

Author(s) Dr. Jagadeesha T L
Country India
Abstract ಮಹಾತ್ಮ ಗಾಂಧಿಯವರಲ್ಲಿದ್ದ ಮೌಲ್ಯಗಳು, ಇಂದಿನ ಸಮಾಜದ ಹೋರಾಟಗಾರರಲ್ಲಿ ಬತ್ತಿಹೋಗಿವೆ. ವಿಶಾಲ ಭಾರತದ ಪ್ರತಿ ಮನುಷ್ಯನಿಗೆ ಬಟ್ಟೆ ದೊರೆಯುವರೆಗೆ ನಾನು ಅರೆಬಟ್ಟೆಯಲ್ಲಿರುತ್ತೇನೆ ಎಂದು ಸಂಕಲ್ಪ ಮಾಡುವವರು ಇಂದು ಯಾರಿದ್ದಾರೆ? ಇಂತಹ ಹತ್ತು ಹಲವು ಆದರ್ಶಗಳ ಖನಿಯಾಗಿದ್ದ ಮಹಾತ್ಮಗಾಂಧೀಜಿಯ ಅಗತ್ಯತೆ ಪ್ರಸ್ತುತದಲ್ಲಿಯೂ ಎದ್ದು ತೋರುತ್ತದೆ.

ಹಸಿರಾಗಿರುವ ಹೆಸರು ಗಾಂಧಿಯದು. ಕಾರಣ ಅವರಲ್ಲಿದ್ದ ಸತ್ಯ ಅಹಿಂಸೆ, ಸತ್ಯಾಗ್ರಹದಂತಹ ಆದರ್ಶಗಳು. ಇಡೀ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ವರ್ಣದ್ವೇಷದ ವಿರುದ್ಧ ಹೋರಾಡಿದ ಗಾಂಧಿ ಮಹಾತ್ಮರಾದುದ್ದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ. ಮಾತ್ರವಲ್ಲ ಮನುಜರು ಮಹಾತ್ಮನಾಗುವುದು ಸುಲಭವೂ ಅಲ್ಲ. ಸೂರ್ಯ ಮುಳುಗದ ಸಾಮ್ರಾಜ್ಯದೊಡನೆ ಹೋರಾಡಿದ ಮಾಂತ್ರಿಕ ಇಂದಿಗೂ ಅಮರ.

ವಿಶ್ವದ ಹಲವು ದೇಶಗಳಲ್ಲಿ ಗಾಂಧಿಯು ಅಸ್ತಿತ್ವದಲ್ಲಿರುವುದು ಅವರ ಔನ್ನತ್ಯದ ಪ್ರತೀಕ. ಅಂತಹ ಮಹಾತ್ಮ ಭಾರತದಂತಹ ಪವಿತ್ರಭೂಮಿಯಲ್ಲಿ ಜನಿಸಿ ಈ ದೇಶದ ಪಾವಿತ್ರ್ಯತೆಯನ್ನು ಇಮ್ಮಡಿಗೊಳಿಸಿದ್ದಾರೆ. ಇಂತಹ ಮಹಾತ್ಮನ ಎದೆಗಾರಿಕೆಯನ್ನು ಚುಟುಕ ಬ್ರಹ್ಮ ದಿನಕರ ದೇಸಾಯಿ ಅವರು ಹೇಳಿರುವುದು ಸಂದರ್ಭೋಜಿತ.
Field Sociology > Linguistic / Literature
Published In Volume 8, Issue 4, July-August 2026
Published On 2026-08-24

Share this