International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 5 (September-October 2026) Submit your research before last 3 days of October to publish your research paper in the issue of September-October.

Durgasimhana Panchatantrada ‘Shivabhutiya Katheʼyalli Paroopakara, Krutajnyate, Krutaghnate Mattu Manava Svabhavada Naitika Vishleshane

Author(s) Dr. Krishnappa K N
Country India
Abstract ಕನ್ನಡದ ಪ್ರಾಚೀನ ಗದ್ಯಸಾಹಿತ್ಯದಲ್ಲಿ ದುರ್ಗಸಿಂಹನ ‘ಪಂಚತಂತ್ರ’ವು ಮಹತ್ವದ ಸ್ಥಾನವನ್ನು ಹೊಂದಿದೆ. ಸಂಸ್ಕೃತದ ಪಂಚತಂತ್ರ ಪರಂಪರೆಯನ್ನು ಕನ್ನಡಕ್ಕೆ ಪರಿಚಯಿಸಿದ ಕೃತಿಗಳಲ್ಲಿ ದುರ್ಗಸಿಂಹನ ಪಂಚತಂತ್ರವು ವಿಶಿಷ್ಟವಾದದ್ದು. ನೀತಿ, ಧರ್ಮ, ರಾಜನೀತಿ, ಮಾನವಸ್ವಭಾವ, ಸ್ನೇಹ, ದ್ರೋಹ, ಕೃತಜ್ಞತೆ, ಕೃತಘ್ನತೆ, ಪರೋಪಕಾರ ಮತ್ತು ವಿವೇಕ ಮುಂತಾದ ಜೀವನಾನುಭವಗಳನ್ನು ಕಥೆಗಳ ಮೂಲಕ ನಿರೂಪಿಸುವುದು ಪಂಚತಂತ್ರದ ಮುಖ್ಯ ಲಕ್ಷಣ. ಈ ಕಥನ ಪರಂಪರೆಯಲ್ಲಿ ‘ಶಿವಭೂತಿಯ ಕಥೆ’ಯು ಮಾನವನ ಗುಣಸ್ವಭಾವವನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಡುವ ಕಥೆಯಾಗಿದೆ. ಪ್ರಾಣಾಪಾಯದಲ್ಲಿದ್ದ ಹುಲಿ, ಸರ್ಪ, ಕಪಿ ಮತ್ತು ಬೇಡನನ್ನು ಶಿವಭೂತಿ ಬಾವಿಯಿಂದ ಮೇಲೆತ್ತಿ ಅವರ ಜೀವವನ್ನು ಉಳಿಸುತ್ತಾನೆ. ಅವರಲ್ಲಿ ಹುಲಿ, ಸರ್ಪ ಮತ್ತು ಕಪಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರೆ, ಬೇಡನು ಶಿವಭೂತಿಯ ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನು ಮಾಡುತ್ತಾನೆ. ಆದರೆ ಕಥೆಯ ಅಂತ್ಯದಲ್ಲಿ ಸರ್ಪದ ಸಹಾಯದಿಂದ ಶಿವಭೂತಿ ತನ್ನ ಸಂಕಷ್ಟದಿಂದ ಪಾರಾಗಿ, ತನ್ನನ್ನು ಮೋಸಗೊಳಿಸಿದ ಕಿರಾತನಿಗೆ ಶಿಕ್ಷೆ ದೊರೆಯುವಂತೆ ಮಾಡುತ್ತಾನೆ. ಹೀಗಾಗಿ ಕಥೆಯು ಪರೋಪಕಾರದ ಮಹತ್ವದ ಜೊತೆಗೆ ಉಪಕಾರವನ್ನು ಅರಿಯದ ಕೃತಘ್ನತೆಯ ಅಪಾಯವನ್ನು ಪ್ರತಿಪಾದಿಸುತ್ತದೆ.
ಈ ಕಥೆಯ ವಿಶೇಷತೆ ಶಿವಭೂತಿಯ ಪಾತ್ರದಲ್ಲಿದೆ. ಹುಲಿ ನೀಡಿದ ಎಚ್ಚರಿಕೆಯನ್ನು ಕೇಳಿದರೂ ಮಾನವೀಯ ಕರುಣೆಯನ್ನು ಬಿಟ್ಟುಕೊಡದ ಅವನು ‘ಯತ್ಪರಾರ್ಥಂ ಶರೀರಂ’ ಎಂಬ ಪರೋಪಕಾರದ ಆದರ್ಶವನ್ನು ಜೀವನದಲ್ಲಿ ಅನುಸರಿಸುತ್ತಾನೆ. ಇನ್ನೊಂದೆಡೆ ಕಂಬಳಕನ ಪಾತ್ರವು ಕೃತಘ್ನತೆಯ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ಜೀವ ಉಳಿಸಿದವನನ್ನೇ ದ್ರೋಹಿಸುವ ಅವನ ಮನೋಭಾವವು ಮನುಷ್ಯನಲ್ಲಿರುವ ಲೋಭ, ಸ್ವಾರ್ಥ ಮತ್ತು ನೀತಿಭ್ರಷ್ಟತೆಯ ರೂಪವನ್ನು ಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ‘ಶಿವಭೂತಿಯ ಕಥೆ’ ಕೇವಲ ಒಂದು ನೀತಿಕಥೆಯಲ್ಲ; ಅದು ಮಾನವ ಸಂಬಂಧಗಳ ಸ್ವರೂಪ, ವ್ಯಕ್ತಿಯ ನೈತಿಕ ಹೊಣೆಗಾರಿಕೆ ಮತ್ತು ಸಮಾಜದಲ್ಲಿ ಒಳ್ಳೆಯತನ ಹಾಗೂ ದುಷ್ಟತನಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುವ ಕಥನವಾಗಿದೆ.
Keywords ದುರ್ಗಸಿಂಹ, ಪಂಚತಂತ್ರ, ಶಿವಭೂತಿ, ಪರೋಪಕಾರ, ಕೃತಜ್ಞತೆ, ಕೃತಘ್ನತೆ, ನೀತಿ ಚಿಂತನೆ, ಮಾನವೀಯತೆ, ಸ್ವಾರ್ಥ.
Field Arts
Published In Volume 8, Issue 5, September-October 2026
Published On 2026-09-05
DOI https://doi.org/10.36948/ijfmr.2026.v08i05.87205

Share this