International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 5 (September-October 2026) Submit your research before last 3 days of October to publish your research paper in the issue of September-October.

'Maadava KaruNa Vilaasa' : Kadambariya Tatvika Swaroopa

Author(s) Dr. Jayashankara M.
Country India
Abstract ಗಳಗನಾಥರ ‘ಮಾಧವ ಕರುಣಾ ವಿಲಾಸ’ ಕಾದಂಬರಿಯು ವಸಾಹತುಶಾಹಿ ಕಾಲಘಟ್ಟದಲ್ಲಿ ರೂಪುಗೊಂಡ ವೈದಿಕ-ಬ್ರಾಹ್ಮಣೀಯ ಧಾರ್ಮಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಪ್ರತಿಬಿಂಬಿಸುವ ಮಹತ್ವದ ಕೃತಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯನ್ನು ಕಥಾವಸ್ತುವಾಗಿ ಹೊಂದಿದ್ದರೂ, ಕಾದಂಬರಿಯ ಪ್ರಧಾನ ಆಶಯ ಸನಾತನ ವೈದಿಕ ಧರ್ಮ, ಚಾತುರ್ವರ್ಣ ವ್ಯವಸ್ಥೆ ಮತ್ತು ಬ್ರಾಹ್ಮಣೀಯ ಯಾಜಮಾನ್ಯವನ್ನು ಪ್ರತಿಷ್ಠಾಪಿಸುವುದಾಗಿದೆ. ಮಾಧವಾಚಾರ್ಯರ ಧರ್ಮಜಿಜ್ಞಾಸೆ, ವಿವಿಧ ಮತೀಯ ಪಾತ್ರಗಳ ಸಂವಾದಗಳು ಹಾಗೂ ಹಿಂದೂ ಸಾಮ್ರಾಜ್ಯದ ಸ್ಥಾಪನೆಯ ಚಿತ್ರಣದ ಮೂಲಕ ಈ ತಾತ್ವಿಕತೆಯನ್ನು ಕೃತಿ ಕಟ್ಟಿಕೊಡುತ್ತದೆ. ಜಾತಿ, ಅಸ್ಪೃಶ್ಯತೆ, ಸ್ತ್ರೀ ಅಧೀನತೆ ಮತ್ತು ವರ್ಣಶ್ರೇಷ್ಠತೆಯಂತಹ ಸಾಂಪ್ರದಾಯಿಕ ಮೌಲ್ಯಗಳ ಪ್ರತಿಪಾದನೆಯೂ ಇಲ್ಲಿ ಕಾಣುತ್ತದೆ. ಹೀಗಾಗಿ, ‘ಮಾಧವಕರುಣಾವಿಲಾಸ’ವು ಚಾರಿತ್ರಿಕ ಕಾದಂಬರಿಗಿಂತಲೂ ವೈದಿಕ-ರಾಜಕೀಯ ಚಿಂತನೆಯ ಪ್ರತಿಪಾದಕ ಕೃತಿಯಾಗಿ ರೂಪುಗೊಂಡಿರುವುದನ್ನು ಈ ಅಧ್ಯಯನ ವಿಶ್ಲೇಷಿಸುತ್ತದೆ.
Keywords ಪ್ರಮುಖ ಪದಗಳು (Keywords): ಮಾಧವ ಕರುಣಾ ವಿಲಾಸ, ಗಳಗನಾಥ, ವೈದಿಕ ಧರ್ಮ, ಬ್ರಾಹ್ಮಣೀಯ ತಾತ್ವಿಕತೆ, ಸನಾತನ ಮೌಲ್ಯಗಳು, ಚಾತುರ್ವರ್ಣ ವ್ಯವಸ್ಥೆ, ಧರ್ಮ–ರಾಜಕೀಯ ಸಂಬಂಧ, ವಸಾಹತುಶಾಹಿ ಪ್ರಜ್ಞೆ, ಮತೀಯ ಪ್ರಜ್ಞೆ, ಹಿಂದೂ ಸಾಮ್ರಾಜ್ಯ, ವಿಜಯನಗರ ಸಾಮ್ರಾಜ್ಯ, ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ಅಧೀನತೆ, ವೈದಿಕ ಯಾಜಮಾನ್ಯ, ಹಿಂದೂತ್ವದ ಚಿಂತನೆ, ಧರ್ಮ ಜಿಜ್ಞಾಸೆ, ರಾಜಕೀಯ ಪ್ರೇರಿತ ಸಾಹಿತ್ಯ, ಮತೀಯ ಮೂಲಭೂತವಾದ, ಕನ್ನಡ ಚಾರಿತ್ರಿಕ ಕಾದಂಬರಿ.
Field Arts
Published In Volume 8, Issue 5, September-October 2026
Published On 2026-09-05
DOI https://doi.org/10.36948/ijfmr.2026.v08i05.87171

Share this